Sri ayu

Sri ayu

Share

Prakriti Ayurvedic clinic
Ramakrishna nagar
Mysore

Photos from Sri ayu's post 12/01/2024

ಕರಂಜ( ಹೊಂಗೆ )
'ತಾಯಿ ಮಡಿಲು ಹೊಂಗೆ ನೆರಳು' ಎಂಬ ಗಾದೆಗೆ ತಕ್ಕ ಹಾಗೆ ಉರಿ ಬಿಸಿಲಿನಲ್ಲಿ ತಂಪನ್ನು ನೀಡುವ ಸಸ್ಯ. ಕಟು, ತಿಕ್ತ, ಕಷಾಯ ರಸ ಹೊಂದಿದ್ದು ಕಟು ವಿಪಾಕ ಹೊಂದಿದೆ. ಸಸ್ಯದ ಪ್ರಮುಖ ಪ್ರಯೋಜನಗಳು
ಗಾಯಗಳಿಗೆ,
ಹಳೆಯ ಒಣಗದ ಗಾಯಗಳನ್ನು ತೊಗಟೆಯ ಕಷಾಯದಿಂದ (ತೊಗಟೆಯನ್ನು ೨೦೦ ಮಿಲಿ ನೀರಿನಲ್ಲಿ ಕುದಿಸಿ ಕಷಾಯ ತಯಾರಿಸುವುದು) ತೊಳೆದು ವೃಣ ರೋಪಣ ತೈಲ ಹಚ್ಚುವದು.
ಚಮ೯ ವ್ಯಾಧಿಯಲ್ಲಿ,
ಹೇನು ಕೆರೆ, ಮೀಸೆ,ಗಡ್ಡ ಮತ್ತು ತಲೆಯಲ್ಲಿ ಕೂದಲಿನ ಉದುರಿವಿಕೆಯನ್ನು ತಡೆಯಲು, ಒಣಗಿದ ಹೊಂಗೆ ಬೀಜಗಳನ್ನು ನೀರಿನಲ್ಲಿ ತೇದು ಗಂಧವನ್ನು ಕೂದಲು ಉದುರುವ ಕಡೆ ಹಚ್ಚುವುದು.
ಕೀಲು ನೋವುಗಳಲ್ಲಿ,
ಕರಂಜವು ವಾತವನ್ನು ಸಮತೋಲನಗೊಳಿಸುವ ಗುಣವನ್ನು ಹೊಂದಿದೆ ಮತ್ತು ಕೀಲುಗಳಲ್ಲಿನ ನೋವು ಮತ್ತು ಊತದಂತಹ ಲಕ್ಷಣಗಳಿಂದ ಪರಿಹಾರವನ್ನು ನೀಡುತ್ತದೆ.ಕರಂಜಚೂರ್ಣದ 1/4-1/2 ಟೀಚಮಚ ತೆಗೆದುಕೊಂಡು ದಿನಕ್ಕೆ ಎರಡು ಬಾರಿ ಊಟದ ನಂತರ ಇದನ್ನು ನೀರಿನೊಂದಿಗೆ ತೆಗೆದುಕೊಳ್ಳುವದು ಹಾಗೂ ಕರಂಜ , ಹರಳೆ, ನಿಗು೯ಂಡಿ ಇವುಗಳ ಎಣ್ಣೆ ಯನ್ನು ಬಿಸಿ ಮಾಡಿ ನೋವಿರುವ ಜಾಗಕ್ಕೆ ಹಚ್ಚಿ ಅದರ ಗಂಟೆ ಬಿಟ್ಟು ಬಿಸಿ ನೀರಿನ ಶಾಖ ಕೊಡುವದು.
ಅರ್ಧ ತಲೆ ನೋವಿಗೆ
ಒಂದೆರೆಡು ಹೊಂಗೆ ಬೀಜಗಳನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ಅರೆದು, ತೆಳು ಬಟ್ಟೆಯಲ್ಲಿ ಹಾಕಿ 2,3 ತೊಟ್ಟು ರಸವನ್ನು ಮೂಗಿನ ಹೊಳ್ಳೆಗಳಿಗೆ ಬಿಡುವುದು.
ತಲೆಯಲ್ಲಿ ಹೇನು ಮತ್ತು ಸೀರುಗಳಿಗೆ
ರಾತ್ರಿ ಮಲಗುವಾಗ ಹೊಂಗೆ ಎಣ್ಣೆ ಹಾಗೂ ಕೊಬ್ಬರಿ ಎಣ್ಣೆಯನ್ನು ಕೂದಲಿಗೆ ಹಚ್ಚಿ ಬಟ್ಟೆ ಕಟ್ಟಿ ಮಲಗುವುದು. ಬೆಳಿಗ್ಗೆ ಎದ್ದು ಸೀಗೇ ಪುಡಿ ಹಾಕಿಕೊಂಡು ಬಿಸಿನೀರಿನಲ್ಲಿ ಸ್ನಾನ ಮಾಡುವುದು( ಸೂಕ್ಷ್ಮ ಚಮ೯ ಹೊಂದಿರುವವರು ಮೊದಲು ಸ್ವಲ್ಪ ಭಾಗಕ್ಕೆ ಹಚ್ಚಿ ಪರೀಕ್ಷಿಸಿ ಬಳಸಿ)
ಜೇನು ಹುಳುಗಳ ಕಡಿತಕ್ಕೆ
ಜೇನು ಹುಳು ಕಡಿದಿರುವ ಕಡೆ ಹೊಂಗೆ ಎಣ್ಣೆಯನ್ನು ಹಚ್ಚುವುದು, ಕಾಡಿನ ಅಕ್ಕಪಕ್ಕದಲ್ಲಿ ವಾಸಿಸುವವರು, ಸ್ವಲ್ಪ ಹೊಂಗೆ ಎಣ್ಣೆಯನ್ನು ಮನೆಯಲ್ಲಿ ಇಟ್ಟಿರುವುದು ಒಳ್ಳೆಯದು.
ಕಣ್ಣು ರೆಪ್ಪೆಗಳ ಮೇಲಿನ ಕೂದಲುಗಳ ನಾಶ ತಪ್ಪಿಸಲು
ಹೊಂಗೆ ಬೀಜ, ತುಳಸಿ ಎಲೆ ಮತ್ತು ಮಲ್ಲಿಗೆ ಮೊಗ್ಗು ಸಮ ತೂಕ ಸೇರಿಸಿ, ಚೆನ್ನಾಗಿ ಜಜ್ಜಿ ಒಂದು ಬಟ್ಟಲು ನೀರಿನಲ್ಲಿ ಹಾಕಿ ಮಂದಾಗ್ನಿಯಲ್ಲಿ ಚೆನ್ನಾಗಿ ಕಾಯಿಸಿ ನೀರು ಇಂಗಿ ಗಟ್ಟಿಯಾದ ಮೇಲೆ ಒಂದು ಬಟ್ಟಲಿನಲ್ಲಿ ಸಂಗ್ರಹಿಸಿ ಕೂದಲು ಉದುರಿರುವ ಕಡೆ ಹಚ್ಚುವುದು.
ಇನ್ನೂ ಅನೇಕ ಪ್ರಯೋಜನ ಹೊಂದಿರುವ ಈ ಸಸ್ಯವನ್ನು ಒಳಗೊಂಡ ಪ್ರಮುಖ ಆಯುರ್ವೇದ ಔಷಧಗಳೆಂದರೆ, ಕರಂಜ ತೈಲ, ಮುರಿವೆಣ್ಣ ತೈಲ ಮುಂತಾದವು.
(ಸಂಗ್ರಹ )
By Dr Usha Vinod
Prakriti ayurvedalaya
Ramakrishna nagar

Photos from Sri ayu's post 12/12/2023

ಬಸವನ ಪಾದ(ಕಾಂಚನಾರ)
ವೃಕ್ಷ ಪ್ರಜಾತಿಗಳಲ್ಲೊಂದಾದ ಕಾಂಚನಾರ ಶ್ವೇತ, ಕೆಂಪು, ಹಳದಿ ಎಂಬ ಮೂರು ವಿಧಗಳನ್ನು ಹೊಂದಿದೆ. ಶೀತ ವೀರ್ಯ ಹಾಗೂ ಕಟು ವಿಪಾಕ ಹೊಂದಿದೆ. ಪ್ರಮುಖ ಉಪಯೋಗಗಳು,
ಗಲಗಂಡ, ಗಂಡ ಮಾಲೆಯಲ್ಲಿ,
ವೃಕ್ಷದ ತೊಗಟೆಯ ಪುಡಿ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಈ ಮಿಶ್ರಣವನ್ನು ಕುತ್ತಿಗೆಯ ಭಾಗದಲ್ಲಿ ಕಂಡುಬರುವ ಗಂಟು ಹಾಗೂ ಊತಗಳಲ್ಲಿ ಲೇಪನಾರ್ಥ ಉಪಯೋಗಿಸುವುದು.
ಮೂತ್ರ ಕೃಚ್ಛ್ರದಲ್ಲಿ,
ಮೂತ್ರದಲ್ಲಿ ಉರಿ, ನವೆ , ಅಲ್ಪ ಮೂತ್ರದಂತಹ ಸಮಸ್ಯೆ ಇದ್ದರೆ ೫ ಗ್ರಾಮ್ ಬೀಜದ ಪುಡಿಯನ್ನು ಒಂದು ಕಪ್ ನೀರಿನಲ್ಲಿ ಬೆರೆಸಿ ಕುಡಿಯುವುದು.
ಥೈರಾಯ್ಡ್ ಸಮಸ್ಯೆಯಲ್ಲಿ,
೨೦ ಗ್ರಾಮ್ ನಷ್ಟು ತೊಗಟೆಯನ್ನು ೨೦೦ ಮಿ. ಲಿ ನೀರಿನಲ್ಲಿ ಕುದಿಸಿ ಕಷಾಯ ಮಾಡಿ ದಿನಕ್ಕೆರಡು ಬಾರಿ ಸೇವಿಸುವದು.ದೇಹದಲ್ಲಿ ಯಾವುದೇ ತರಹದ ಗಂಟುಗಳಾದರೂ(tonsils, cyst, lipoma, lymphoma,cancer etc) ಈ ಪ್ರಯೋಗ ಮಾಡಬಹುದು.
ಮುಟ್ಟಿನ ತೊಂದರೆ ಕಂಡುಬಂದಲ್ಲಿ,
ಅತಿಯಾದ ರಕ್ತ ಸ್ರಾವ, ಅಲ್ಪಾತ೯ವದಂತಹ ಸಮಸ್ಯೆಗಳಲ್ಲಿ ಮೇಲೆ ಹೇಳಿದ ಪ್ರಕಾರ ತೊಗಟೆಯ ಕಷಾಯ ಮಾಡಿ ಸೇವನೆ ಮಾಡುವುದರಿಂದ ಪ್ರಯೋಜನ ವಿದೆ.
ಅತಿಸಾರ, ಭೇದಿಯಲ್ಲಿ,
ಪಿತ್ತ ದುಷ್ಟಿಯಿಂದ ಉಂಟಾದ ಅತಿಸಾರ ಭೇದಿಯಲ್ಲಿ ತೊಗಟೆಯ ಕಷಾಯ ಎರಡು ಬಾರಿ (ದಿನದಲ್ಲಿ)ಸೇವಿಸುವದು. ಗ್ರಾಹಿ ಹಾಗೂ ಕಷಾಯ ಗುಣ ಹೊಂದಿರುವುದರಿಂದ ಅತಿಸಾರ ನಿಯಂತ್ರಣಕ್ಕೆ ಬರುವದು.
ವೃಣ ಶೋಧನಾಥ೯,
ತೊಗಟೆಯ ಕಷಾಯ ಗಾಯಗಳನ್ನು ಸ್ವಚ್ಛಗೊಳಿಸಲು ಬಳಸುವುದು. ಊತವನ್ನು ಕಡಿಮೆ ಮಾಡುತ್ತದೆ ಹಾಗೂ ಸೋಂಕು ನಿವಾರಕವಾಗಿ ಕೆಲಸ ಮಾಡುತ್ತದೆ.
ತೂಕ ನಿಯಂತ್ರಣ ಹಾಗೂ ಮಧುಮೇಹದಲ್ಲಿ,
ಮೆದುಳಿನಲ್ಲಿ ಸಿರೊಟೋನಿನ್ ಎಂಬ ಹಾರ್ಮೋನ್ ಬಿಡುಗಡೆಗೆ ಸಹಾಯ ಮಾಡುತ್ತದೆ. ಸಿರೊಟೋನಿನ್ ಹಸಿವು ನಿಗ್ರಹಕವಾಗಿ ಕೆಲಸ ಮಾಡುತ್ತದೆ. ಇದರಿಂದ ತೂಕ ನಿಯಂತ್ರಣಕ್ಕೆ ಬರುವದು. ಫ್ಲೇವನಾಯ್ಡ್‌ಗಳ ಉಪಸ್ಥಿತಿಯಿಂದಾಗಿ ತೊಗಟೆಯನ್ನು ಮಧುಮೇಹದಲ್ಲಿ ಉಪಯುಕ್ತವಾಗಬಹುದು.
ಇನ್ನೂ ಅನೇಕ ಪ್ರಯೋಜನ ಹೊಂದಿರುವ ಈ ಸಸ್ಯ ವನ್ನು ಒಳಗೊಂಡ ಪ್ರಮುಖ ಆಯುರ್ವೇದ ಔಷಧಗಳೆಂದರೆ
ಕಾಂಚನಾರ ಗುಗ್ಗುಲ, ಕಾಂಚನಾರ ಕಷಾಯ. ಮುಂತಾದವು.

By Dr Usha Vinod
Prakriti ayurvedalaya
Ramakrishna nagar
Mysore,
7349057398

Photos from Sri ayu's post 27/11/2023

ಲಕ್ಕಿ ಗಿಡ(ನಿಗು೯ಂಡಿ)
ಸಾಮಾನ್ಯವಾಗಿ ಪೂಜೆ ಅಚ೯ನೆಗಳಿಗೆ, ಕೀಟ ನಿಯಂತ್ರಣಕ್ಕೆ ಉಪಯೋಗಿಸಲ್ಪಡುವ ಈ ಸಸ್ಯ ಆಯುರ್ವೇದದ ಪ್ರಮುಖ ಔಷಧೀಯ ಸಸ್ಯವಾಗಿದೆ. ಶ್ವೇತ ಹಾಗೂ ಕೃಷ್ಣ ಎಂಬ ಎರಡು ಪ್ರಭೇಧಗಳನ್ನು ಹೊಂದಿದೆ.ಉಷ್ಣ ವೀರ್ಯವಾಗಿರುವದರಿಂದ ಪಿತ್ತ ಪ್ರಕೃತಿಯವರು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸುವುದು.
ಗಂಟಲು ನೋವು,ವಸಡಿನ ತೊಂದರೆಗಳಲ್ಲಿ,
ಎಲೆಗಳನ್ನು ನೀರಿನಲ್ಲಿ ಕುದಿಸಿ ಬಾಯಿ ಮುಕ್ಕಳಿಸುವುದು.ಎಂಟಿ ಇನ್ಫ್ಲಮೇಟರಿ ಗುಣವನ್ನು ಹೊಂದಿರುವುದರಿಂದ ಮೇಲ್ಕಂಡ ತೊಂದರೆಗಳಲ್ಲಿ ಉಪಯೋಗಕಾರಿ.
ಗಂಡ ಮಾಲೆಯಲ್ಲಿ,
ಗಿಡದ ತೊಗಟೆಯನ್ನು ತೇದು ಲೇಪನಾರ್ಥ ಉಪಯೋಗಿಸುವುದು.
ಮೂಛೆ೯ ಹೋದರೆ,
ಲಕ್ಕಿ ಎಲೆಯ ರಸವನ್ನು (୭-೮ ) ಮೂಗಿನ ಹೊಳ್ಳೆಗಳಲ್ಲಿ ಹಾಕುವದು.
ಉಳುಕಿನಲ್ಲಿ,
ಎಲೆಗಳನ್ನು ಬಿಸಿ ಮಾಡಿ ಊತ ಇರುವ ಜಾಗದ ಮೇಲಿರಿಸಿ ಪಟ್ಟಿಯನ್ನು ಕಟ್ಟುವುದು.
ಕಫ ಹಾಗೂ ಕೆಮ್ಮು,
ಎದೆಯಲ್ಲಿ ಕಫ ಕಟ್ಟಿ ಕೆಮ್ಮು ಬರುತ್ತಿದ್ದರೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಹಬೆಯನ್ನು ತೆಗೆದುಕೊಳ್ಳುವದು
ಮಂಡಿ ನೋವು, ಭುಜ ನೋವು,
ಎಲೆಗಳನ್ನು ನೀರಿನಲ್ಲಿ ಕುದಿಸಿ, ಈ ನೀರಿನಿಂದ ನೋವಿರುವ ಜಾಗಕ್ಕೆ ಶಾಖ ಕೊಡುವುದು.
ಮುಟ್ಟಿನ ಸಮಸ್ಯೆ,
ಮುಟ್ಟಿನ ಮೊದಲು ಕಂಡು ಬರುವ ಮಾನಸಿಕ ಸಮಸ್ಯೆ (mood swings) ಯಲ್ಲಿ ಕೂಡ ಎಲೆಗಳ ಕಷಾಯ ಕುಡಿಯಬಹುದು.
ಯಕೃತ್ತಿನ ವಿಕಾರಗಳಲ್ಲಿ,
ಈ ಸಸ್ಯ ( negundoside, agundoside) ಹೊಂದಿದ್ದು ಸಿರಮ್ ಬಿಲಿರುಬಿನ್, ಟಿ. ಪಿ, ಅಲ್ಕಲಾಯ್ಡ ಫಾಸ್ಫೇಟೇಸ್ ಕಡಿಮೆ ಮಾಡುವುದು ಹಾಗೂ ಯಕೃತ್ತಿನ ಊತ ಕಡಿಮೆ ಮಾಡುವುದು.
ಕೃಷ್ಣ ನಿಗು೯ಂಡಿ ಕ್ಯಾನ್ಸರ್ ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಇನ್ನೂ ಅನೇಕ ಉಪಯೋಗಗಳನ್ನು ಹೊಂದಿರುವ ಈ ಸಸ್ಯವನ್ನು ಒಳಗೊಂಡ ಪ್ರಮುಖ ಆಯುರ್ವೇದ ಔಷಧಗಳೆಂದರೆ, ನಿಗು೯ಂಡಿ ತೈಲ, ನಿಗು೯ಂಡ್ಯಾದಿ ಕಷಾಯ, ಮಾನಸ ಮಿತ್ರ ವಟಕ, ಮಹಾವಾತವಿಧ್ವಂಸ ರಸ ಮುಂತಾದವು.
By Dr Usha Vinod
Prakriti ayurvedalaya
Ramakrishna nagar
Mysore,
7349057398

Photos from Sri ayu's post 21/11/2023

(ಆವತ೯ಕಿ) ತಂಗಡಿ ಸೊಪ್ಪು
ಆವರಿಕೆ, ಹೊನ್ನಾವರಿಕೆ ಮುಂತಾದ ಅನ್ವಥ೯ನಾಮವುಳ್ಳ ತಂಗಡಿ ಸೊಪ್ಪು ಕಫ ಪಿತ್ತ ದೋಷ ಕಡಿಮೆ ಮಾಡುತ್ತದೆ ಹಾಗೂ ಶೀತವೀಯ೯ವಾಗಿದೆ.
ಮೂತ್ರ ಕೃಚ್ಛ್ರದಲ್ಲಿ,
ರೋಗ ನಿರೋಧಕ ಶಕ್ತಿಯನ್ನು ಹೊಂದಿರುವುದರಿಂದ ಮೂತ್ರ ಕೋಶದ ಸೋಂಕು, ಉರಿ ಮೂತ್ರ ಸಮಸ್ಯೆ ನಿವಾರಣೆಯಾಗುವದು. ಒಣಗಿಸಿದ ಹೂವಿನ ಪುಡಿಯನ್ನು ಚಹಾ ಮಾಡಿ ಕುಡಿಯುವದು.
ಕೂದಲ ಬೆಳವಣಿಗೆಗೆ,
ನೆಲ್ಲಿಕಾಯಿ, ಮೆಂತ್ಯ, ಮೆಹಂದಿ, ಕರಿಬೇವು, ತಂಗಡಿ ಹೂವು, ಭ್ರಂಗರಾಜ ಬೆರೆಸಿ ತಯಾರಿಸಿದ ಎಣ್ಣೆ ಬಳಸುವುದರಿಂದ ಕೂದಲು ಉದುರುವಿಕೆ ಕಡಿಮೆಯಾಗುವುದು ಹಾಗೂ ಬಾಲನೆರ ಸಮಸ್ಯೆ ದೂರವಾಗುವುದು.
ಪ್ರಮೇಹಹರವಾಗಿ ,
ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯನ್ನು ಹೆಚ್ಚಿಸಿ ತನ್ಮೂಲಕ ಸಕ್ಕರೆ ಅಂಶವನ್ನು ಕಡಿಮೆ ಮಾಡುವದು. ಖಾಲಿ ಹೊಟ್ಟೆಯಲ್ಲಿ ಒಣಗಿಸಿದ ಹೂವಿನ ಕಷಾಯ (ಒಂದು ಚಮಚ ಹೂವನ್ನು ಒಂದು ಕಪ್ ನೀರಿನಲ್ಲಿ ಕುದಿಸಿ)
ಕಣ್ಣು ಬೇನೆ (ಮದ್ರಾಸ್ ಕಣ್ಣು)
ಬೀಜದ ಪುಡಿಯನ್ನು (ನೀರಿನಲ್ಲಿ )ಪೇಸ್ಟ್ ಮಾಡಿ ಕಣ್ಣಿನ ರೆಪ್ಪೆಗಳ ಮೇಲೆ ಹಚ್ಚುವದು(ಕಣ್ಣು ಮುಚ್ಚಿರಬೇಕು).
ದೇಹದ ದುಗ೯ಂಧದಲ್ಲಿ
ಒಣಗಿಸಿದ ಹೂವಿನ ಪುಡಿಯನ್ನು ನೀರಿನಲ್ಲಿ ಕುದಿಸಿ, ಈ ನೀರನ್ನು ಸ್ನಾನದ ನೀರಿಗೆ ಬೆರೆಸಿ ಸ್ನಾನ ಮಾಡಬೇಕು.
ಮುಖದ ಮೇಲಿನ ಕಲೆಗಳಿಗೆ,
ಹೂವಿನ ಪುಡಿಯನ್ನು ಮೊಸರಿನೊಂದಿಗೆ ಬೆರೆಸಿ ಫೇಸ್ ಪ್ಯಾಕ್ ತರಹ ಹಚ್ಚಿ ೧೫ ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳುವದು. ಸುಟ್ಟ ಗಾಯ, ಅದರಿಂದ ಉಂಟಾದ ಕಲೆಗಳಲ್ಲಿಯೂ ಪ್ರಯೋಜನಕಾರಿ.
ವೀರ್ಯ ಉತ್ಪಾದನೆ (ಬೀಜ, ಬೇರು) ಸೇರಿದಂತೆ ಇನ್ನೂ ಹಲವು ಬಗೆಯ ಪ್ರಯೋಜನಗಳನ್ನು ಹೊಂದಿರುವ ಈ ಸಸ್ಯ ಒಳಗೊಂಡ ಪ್ರಮುಖ ಆಯುರ್ವೇದ ಔಷಧಗಳೆಂದರೆ, ಆವತ೯ಕಿ ಘ್ರತ, ಅಕುಲ್ಯಾದಿ ಪುಟಪಾಕ.


By Dr Usha Vinod
Prakriti ayurvedalaya
Ramakrishna nagar
Mysore,
7349057398

10/11/2023

ಹುಳಿ ಸೊಪ್ಪು(ಚಾಂಗೇರಿ)

ಹೆಸರೇ ಸೂಚಿಸುವಂತೆ ಆಮ್ಲ ರಸವನ್ನು ಹೊಂದಿರುವ ಈ ಗಿಡಮೂಲಿಕೆ ಉಷ್ಣ ವೀರ್ಯ ಹಾಗೂ ಕಫವಾತಹರವಾಗಿದೆ. ದಾರಿಯ ಬದಿಯಲ್ಲಿ, ಹೊಲದಲ್ಲಿ ಯಥೇಚ್ಛವಾಗಿ ಬೆಳೆದಿರುತ್ತದೆ.

ತಲೆ ನೋವು ಹಾಗೂ ನಿದ್ರಾಹೀನತೆಯಲ್ಲಿ,
ಹುಳಿ ಸೊಪ್ಪಿನ ಜೊತೆ ಈರುಳ್ಳಿಯನ್ನು ಬೇಯಿಸಿ ಅದರ ರಸ ಹಣೆಗೆ ಲೇಪಿಸಿದರೆ ತಲೆನೋವು ಕಡಿಮೆಯಾಗುವುದು. ಇದರ ಸೇವನೆಯಿಂದ ರಕ್ತದಲ್ಲಿರುವ ಕಾಟಿ೯ಸಾಲ್ (stress harmone) ಕಡಿಮೆಯಾಗಿ ನಿದ್ರೆ ಬರುವುದು.
ಆಮಶಂಕೆ ಭೇದಿಯಲ್ಲಿ,
೨-೫ ಗ್ರಾಂ ಸೊಪ್ಪಿನ ರಸವನ್ನು ೨-೩ ಬಾರಿ ಸೇವಿಸುವದು. ಇದು ಈ ಸಸ್ಯದ ವಿಶೇಷ ಉಪಯೋಗ ವಾಗಿದೆ. ೩೦-೪೦ ಎಲೆಗಳ ಕಷಾಯ ಮಾಡಿ ಇಂಗು ಬೆರೆಸಿ ಸೇವಿಸಿದರೆ ಹೊಟ್ಟೆ ನೋವು ಶಮನವಾಗುವುದು.
ಮೂಲವ್ಯಾಧಿಯಲ್ಲಿ,
ಸಸ್ಯದ ಪಂಚಾಂಗವನ್ನು ತುಪ್ಪದಲ್ಲಿ ಹುರಿದು ಪಲ್ಯ ಮಾಡಿ ಮೊಸರಿನ ಜೊತೆ ಸೇವಿಸುವದು.ಎಲೆಯ ರಸವನ್ನು ಮೂಲವ್ಯಾಧಿಯ ಮೊಳಕೆಗೆ ಹಚ್ಚುವದು.

ಹಲ್ಲಿನ ಸಮಸ್ಯೆಗಳಲ್ಲಿ ,
ಎಲೆಗಳ ರಸ ಸೇವಿಸುವದು ಹಾಗೂ ಬಾಯಿ ಮುಕ್ಕಳಿಸುವುದರಿಂದ ವಸಡಿನ ರಕ್ತ ಸ್ರಾವ ನಿಲ್ಲುವುದಲ್ಲದೇ ಬಾಯಿಂದ ಬರುವ ದೌಗ೯ಂಧ್ಯ ನಿಯಂತ್ರಣಕ್ಕೆ ಬರುವದು. (ವಿಟಮಿನ್ ಸಿ ಯ ಆಗರ)
ನರವಲಿಯಲ್ಲಿ( wart) ,
ಎಲೆಯ ರಸ ಹಾಗೂ ಈರುಳ್ಳಿ ರಸ ಮಿಶ್ರಣ ನರವಲಿಯ ಗಂಟುಗಳ ಮೇಲೆ ಹಚ್ಚುವದು.
ಇನ್ನೂ ಅನೇಕ ಪ್ರಯೋಜನಗಳಿರುವ ಈ ಗಿಡಮೂಲಿಕೆ ಯನ್ನು ಒಳಗೊಂಡ ಪ್ರಮುಖ ಔಷಧಗಳೆಂದರೆ, ಚಾಂಗೇರಿ ಘ್ರತ, ಜೀವಂತ್ಯಾದಿ ಘ್ರತ ಮುಂತಾದವು.

By Dr Usha Vinod
Prakriti ayurvedalaya
Ramakrishna nagar
Mysore,
7349057398

08/11/2023

ಎಕ್ಕದ ಗಿಡ

ಹಿಂದಿನ ಕಾಲದಲ್ಲಿ ಹಾವು ಕಚ್ಚಿದಾಗ, ಚೇಳು ಕಡಿದಾಗ , ಮುಳ್ಳು ಚುಚ್ಚಿದಾಗ ದೇಹಕ್ಕೆ ನಂಜು ಏರುವದನ್ನು ತಡೆಯಲು ಉಪಯೋಗಿಸುತ್ತಿದ್ದ ಸಸ್ಯ ಪ್ರಬೇಧದಲ್ಲಿ ಎಕ್ಕದ ಗಿಡವು ಪ್ರಮುಖವಾಗಿದೆ. ಆಧ್ಯಾತ್ಮಿಕ ವಾಗಿಯೂ, ವೈದ್ಯಕೀಯವಾಗಿಯೂ ಬಳಸಲ್ಪಡುವ ಈ ಸಸ್ಯ ಉಷ್ಣ ವೀರ್ಯವಾಗಿದ್ದು ಶೀತ ಹಾಗೂ ಕಫ ಪ್ರಕೃತಿಯ ವರು ಬಳಸಬಹುದಾಗಿದೆ.

ಊತ, ಮಂಡಿ ನೋವುಗಳಲ್ಲಿ,
ಎಕ್ಕದ ಎಲೆಗಳ ಮೇಲೆ ಹರಳೆಣ್ಣೆಯನ್ನು ಸವರಿ ಕಾವಲಿಯ ಮೇಲೆ ಬಿಸಿ ಮಾಡಿ ಊತ ಇರುವ ಜಾಗದ ಮೇಲಿರಿಸಿ ಪಟ್ಟಿಯನ್ನು ಕಟ್ಟುವುದು. ಈ ರೀತಿ ೪-೫ ದಿನ ಮಾಡಬೇಕು.

ಕೆಮ್ಮು, ದಮ್ಮು ಗಳಲ್ಲಿ,
ಎಕ್ಕದ ಹೂವುಗಳನ್ನು ನೆರಳಲ್ಲಿ ಒಣಗಿಸಿ ಪುಡಿ ಮಾಡಿ, ಒಂದು ಚಿಟಿಕೆ ಪುಡಿಗೆ ಒಂದು ಚಿಟಿಕೆ ಕಲ್ಲುಪ್ಪು ಬೆರೆಸಿ ಸೇವಿಸುವುದು (ಬಿಸಿ ನೀರಿನಲ್ಲಿ ಬೆರೆಸಿ ಉಪಯೋಗಿಸಬಹುದು)

ಕಿವಿ ನೋವಿನಲ್ಲಿ,
ಹಳದಿಯಾದ ಎಲೆಯನ್ನು ಜಜ್ಜಿ ರಸ ತೆಗೆದು ೧-೨ ಹನಿಗಳನ್ನು ಕಿವಿಯಲ್ಲಿ ಹಾಕುವದು. ಇದರಿಂದ ನೋವು ಶಮನವಾಗುವುದು.

ಮುಟ್ಟಿನ ತೊಂದರೆ,
ಮುಟ್ಟಿನ ಪ್ರಕ್ರಿಯೆ ಅನಿಯಮಿತವಾಗಿದ್ದಲ್ಲಿ. ಒಣಗಿಸಿದ ಎಕ್ಕದ ಹೂವು ಹಾಗೂ ಬೆಲ್ಲ ಸೇರಿಸಿ ಚಿಕ್ಕ ಚಿಕ್ಕ (ಕಡಲೆ ಗಾತ್ರದ) ಉಂಡೆ ಮಾಡಿ ನಿತ್ಯ ಸೇವಿಸಬೇಕು.

ಬಿಳಿ ತೊನ್ನು,
ಬಲಿತ ಅರಿಶಿನ ಕೊಂಬು ಹಾಗೂ ಬಲಿತ ಎಕ್ಕದ ಬೇರು ತಣ್ಣೀರಿನಲ್ಲಿ ತೇದು ತೊನ್ನಿರುವ ಭಾಗಕ್ಕೆ ಹಚ್ಚುವುದು. (ಮೊದಲು ಸ್ವಲ್ಪ ಭಾಗಕ್ಕೆ ಹಚ್ಚಿ ಅಲಜಿ೯ ಆಗದಿದ್ದರೆ ಈ ಪ್ರಯೋಗ ಮಾಡಿ)

ಕಾಲಿನ ಅಣಿಯಲ್ಲಿ,
ಎಲೆಯ ಹಾಲು ಅಣಿಯಾದಲ್ಲಿ ಹಚ್ಚುವುದು. (ಎಕ್ಕದ ಹಾಲು ಚಮ೯ ಸುಡುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಉಪಯೋಗಿಸಿ)

ಮಧುಮೇಹದಲ್ಲಿ,
ಒಣಗಿಸಿದ ಎಕ್ಕದ ಹಾಲು (ಔಷಧ ರೂಪದಲ್ಲಿ) ನಿತ್ಯ ಸೇವನೆಯಿಂದ ಸಕ್ಕರೆ ಅಂಶ ಕಡಿಮೆಯಾಗಿ ಗ್ಲೈಕೋಜನ್ ಅಂಶವು ಏರಿಕೆಯಾಗುತ್ತದೆ. ಗ್ಲೈಬೆನಕ್ಲಮೈಡ್ ಔಷಧಕ್ಕೆ ಸರಿಸಾಟಿಯಾಗಿದೆ.

ಇನ್ನೂ ಅನೇಕ ಪ್ರಯೋಜನಗಳನ್ನು ಹೊಂದಿರುವ ಈ ಸಸ್ಯವನ್ನು ಒಳಗೊಂಡಿರುವ ಪ್ರಮುಖ ಆಯುರ್ವೇದೀಯ ಔಷಧಗಳೆಂದರೆ, ಅಕ೯ ಲವಣ, ಅಕಾ೯ದಿ ಕಷಾಯ, ಅಸನಾದಿ ಕಷಾಯ, ಸೂತಿಕಾಭರಣ ರಸ,ಏಕಾಂಗ ವೀರ ರಸ, ಮಹಾವಾತವಿಧ್ವಂಸ ರಸ ಮುಂತಾದವು.
By Dr Usha Vinod
Prakritiayurvedalaya
Ramakrishna nagar
Mysore,
7349057398

22/04/2022

Dr usha vinod

ಪಾರಿಜಾತ

ಸೂರ್ಯ ಮುಳುಗುವ ಹೊತ್ತಲ್ಲಿ ಅರಳುವ ಈ ಸಸ್ಯ ಹರಶೃಂಗಾರ,ರಕ್ತಕೇಸರ, ಶೇಫಾಲಿ, ದೇವ ಪುಷ್ಪ ಮುಂತಾದ ಪರ್ಯಾಯ ನಾಮಗಳನ್ನು ಹೊಂದಿದೆ.

ಸಮುದ್ರ ಮಂಥನ ಕಾಲದಲ್ಲಿ ಹುಟ್ಟಿದ ವೃಕ್ಷಗಳಲ್ಲಿ ಪಾರಿಜಾತವೂ ಒಂದು. ಇಂದ್ರ ತನ್ನ ಉದ್ಯಾನದಲ್ಲಿ ಪಾರಿಜಾತ ಸಸ್ಯವನ್ನು ನೆಟ್ಟಿದ್ದು,ಇನ್ನು ಅನೇಕ ಕಥನಗಳಲ್ಲಿ ಈ ಸಸ್ಯದ ಉಲ್ಲೇಖವಿದೆ.

ಪಾರಿಜಾತ ತಿಕ್ತ ರಸಾತ್ಮಕವಾಗಿದ್ದು ಉಷ್ಣ ವೀರ್ಯ ಗುಣವನ್ನು ಹೊಂದಿದೆ.

ಜೀರ್ಣ ಜ್ವರದಲ್ಲಿ (ಮಲೇರಿಯಾ ) -

ಪಾರಿಜಾತ ಎಲೆಗಳ ರಸವನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಲಾಭಕಾರಿಯಾಗಿದೆ. ಅಲ್ಲದೆ ೩ಚಮಚ ಆಲೀವ್ ಎಣ್ಣೆ ಹಾಗೂ ಎರಡು ಹನಿ ಪಾರಿಜಾತ ಎಣ್ಣೆ ಸೇರಿಸಿ ಪಾದಾಭ್ಯಂಗ ಮಾಡುವುದು.

ಅಸ್ತಮ ಹಾಗೂ ಕಫ ವಿಕಾರಗಳಲ್ಲಿ,

ಪಾರಿಜಾತ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ೨-೩ ಗ್ರಾಮ್ ನಷ್ಟು ಪುಡಿಯನ್ನು ತಾಂಬೂಲ ಸ್ವ ರಸದಲ್ಲಿ(ವೀಳ್ಯದೆಲೆ ರಸ) ಮಿಶ್ರಣ ಮಾಡಿ ಉಪಯೋಗಿಸುವದು.

ಹೊಟ್ಟೆಯಲ್ಲಿ ಹುಳು ವಾದರೆ,

೧೦-೧೫ಮಿ.ಲಿನಷ್ಟು ಎಲೆಗಳ ರಸವನ್ನು ಸೇವಿಸುವುದರಿಂದ ಪ್ರಯೋಜನಕಾರಿ.

ಗಜಕರ್ಣ, ತುರಿಕೆ ಮುಂತಾದ ತೊಂದರೆಗಳಿಗೆ,

ಪಾರಿಜಾತ ಎಲೆಗಳ ಪೇಸ್ಟ ಮಾಡಿ ತುರಿಕೆ ಇರುವ ಜಾಗಕ್ಕೆ ಹಚ್ಚುವುದು.

ರಕ್ತಹೀನತೆ ಯಲ್ಲಿ,

ಪಾರಿಜಾತ ಎಲೆಗಳ ರಸವನ್ನು ಲೋಹ ಭಸ್ಮದ ಜೊತೆ ಸೇವಿಸುವದು. ಇಲ್ಲವೇ ಪಾರಿಜಾತ ಗಿಡದ ಚಿಗುರು, ಶುಂಠಿ ರಸ ಹಾಗೂ ಜೇನುತುಪ್ಪ ಬೆರೆಸಿ ಸೇವಿಸುವದರಿಂದ ರಕ್ತ ವೃದ್ಧಿಯಾಗುವದು.

ಒತ್ತಡದಲ್ಲಿ,

ಪಾರಿಜಾತ ಹೂವಿನ ಎಣ್ಣೆ ತಲೆಗೆ ಹಚ್ಚುವುದರಿಂದ, ಅಭ್ಯಂಗಕ್ಕೆ ಬಳಸುವದರಿಂದ ಒತ್ತಡವು ದೂರವಾಗುವುದಲ್ಲದೆ ನಿದ್ರಾಹೀನತೆಗೆ ರಾಮಬಾಣ. ಮತ್ತೊಂದು ಸರಳವಾದ ವಿಧಾನವೆಂದರೆ ರಾತ್ರಿ ಮಲಗುವಾಗ ದಿಂಬಿನ ಪಕ್ಕ ೨ಹನಿ ಪಾರಿಜಾತ ಎಣ್ಣೆ ಹಾಕಿ ರುವ ಕರವಸ್ತ್ರ ಇಡುವುದು.

ಸಂಧಿವಾತ ಹಾಗೂ ಗೃಧೃಸಿಯಲ್ಲಿ,

ಪಾರಿಜಾತ ಎಲೆ ಹಾಗೂ ಹೂಗಳು ಶೋಥಹರ ಗುಣ ಹೊಂದಿದ್ದು, ೨-೩ ಎಲೆಗಳನ್ನು ಒಂದು ಕಪ್ ನೀರಿನಲ್ಲಿ ಬೆರೆಸಿ ಕಾಲು ಭಾಗ ನೀರು ಉಳಿಯುವವರೆಗೆ ಕುದಿಸುವುದು. ಈ ಕಷಾಯವನ್ನು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಒಂದು ವಾರದವರೆಗೆ ಸೇವಿಸುವುದು. ಪ್ರತಿದಿನ ತಾಜಾ ಎಲೆಗಳಿಂದ ಕಷಾಯ ತಯಾರಿಸಬೇಕು. ಈ ರೀತಿ ಮಾಡುವುದರಿಂದ ಮಂಡಿ ನೋವು ನಿವಾರಣೆಯಾಗುವದು.

ರೋಗನಿರೋಧಕ ವಾಗಿ,

ಪಾರಿಜಾತ ಎಲೆ ಹಾಗೂ ಹೂಗಳು ಎಥೆನಾಲ್ ಎಂಬ ಅಂಶವನ್ನು ಹೊಂದಿದ್ದು, ಮೇಲೆ ಹೇಳಿದ ಪ್ರಕಾರ ಕಷಾಯ ಮಾಡಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುವುದು.

ಇನ್ನೂ ಅನೇಕ ರೀತಿಯ ಪ್ರಯೋಜನಗಳನ್ನು ಹೊಂದಿದ್ದು, ಪಾರಿಜಾತ ವನ್ನು ಒಳಗೊಂಡಿರುವ ಪ್ರಮುಖ ಆಯುರ್ವೇದ ಔಷಧಗಳೆಂದರೆ, ಮಾನಸ ಮಿತ್ರ ವಟಕ, ಬಲಾ ತೈಲ, ಅಶ್ವಗಂಧಾರಿಷ್ಠ.

21/01/2022

Dr usha vinod

ಅರಿಶಿನ

ಅರಿಶಿನದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ.ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಒಂದಿಷ್ಟು ಅಂಶಗಳು ಇಲ್ಲಿದೆ.ರುಚಿಯಲ್ಲಿ ಕಹಿಯಾಗಿರುವ
ಅರಿಶಿನದ ಬೇರು ಉಷ್ಣವೀರ್ಯವಾಗಿದ್ದು, ಕಫ ವಾತ ಹರವಾಗಿದೆ .ತಿಕ್ತ ರಸವನ್ನು ಹೊಂದಿರುವುದರಿಂದ ಪಿತ್ತ ಶಾಮಕವಾಗಿದೆ.ಇದರಲ್ಲಿರುವ curcumin ಎಂಬ ಅಂಶವು ಹಳದಿ ವರ್ಣವನ್ನು ನೀಡುವುದು.

ಪ್ರಮೇಹಹರವಾಗಿ(ಸಕ್ಕರೆ ಖಾಯಿಲೆ),

'ಹರಿದ್ರಾ ಪ್ರಮೇಹಹರಣಾಮ್'(ಅ.ಹ್ರ)

ಹರಿದ್ರಾ(ಅರಿಶಿನ) ತನ್ನ ಉಷ್ಣ ,ಕಟು ತಿಕ್ತರಸ ,ಲಘು ರೂಕ್ಷ ಗುಣಗಳಿಂದ ಕಫ ಮೇದೋಹರ(lipolytic and anti cholesterol)ವಾಗಿದ್ದು ತನ್ಮೂಲಕ ಪ್ರಮೇಹ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ದೇಹದಲ್ಲಿ ಕಫ ಸಂಚಯದಿಂದಾಗಿ(free circulating fat) ಪ್ರಮೇಹ ರೋಗ ಉತ್ಪತ್ತಿಯಾಗುತ್ತದೆ.ಅರಿಶಿನ ಹಾಗೂ ನೆಲ್ಲಿಕಾಯಿಯ ನಿಯಮಿತ ಪ್ರಯೋಗದಿಂದ ಪ್ರಮೇಹ ನಿಯಂತ್ರಣದಲ್ಲಿ ಇಡಬಹುದು.

ಕಾಮಾಲೆ ರೋಗದಲ್ಲಿ,

ಕಾಮಾಲೆಯಲ್ಲಿ ಅರಿಶಿನ ಪ್ರಯೋಗ ತುಂಬಾ ಪ್ರಯೋಜನಕಾರಿ. ಅರಿಶಿನ ಬಣ್ಣ ಹಳದಿ ಇರುವುದರಿಂದ ಕಾಮಾಲೆ ಯಲ್ಲಿ ಪ್ರಯೋಗ ಮಾಡಬಾರದೆಂಬ ಮಿಥ್ಯ ಇದೆ. 6ಗ್ರಾಮ್ ಅರಿಶಿನದ ಪುಡಿಯನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು (ಉಪ್ಪನ್ನು ಬೆರೆಸಬಾರದು) .‌

ಗಾಯಗಳಿಗೆ, ರಕ್ತಸ್ರಾವವಾಗುತ್ತಿದ್ದರೆ ಹತೋಟಿಗೆ,

ಗಾಯವಾದ ತಕ್ಷಣ ಅರಿಶಿನ ಪುಡಿಯನ್ನು ಲೇಪನ ಮಾಡಿ, ಬಟ್ಟೆ ಕಟ್ಟುವುದು. ರಕ್ತ ಸೋರುವುದು ನಿಲ್ಲುವುದು (ಸಣ್ಣ ಗಾಯಗಳಿಗೆ). ಇದು ವಿಷಹರ- ಆಂಟಿ ಸೆಪ್ಟಿಕ್ ನಂತೆ ಕೆಲಸ ಮಾಡುತ್ತದೆ.

ಸೌಂದರ್ಯ ವರ್ಧನೆಗೆ,

ಅರಿಶಿನ ಸೌಂದರ್ಯ ವರ್ಧಕವಾಗಿ ಬಳಸುವುದು ಸಾಮಾನ್ಯ.ಆದರೆ ಬಳಸುವ ಮೊದಲು ಸ್ಕಿನ್ ಟೆಸ್ಟ್ ಮಾಡಿ ಬಳಸುವುದು ಉತ್ತಮ.ನೀವು ಬಳಸಬೇಕೆಂದಿರುವ ಅರಿಶಿನ ಪುಡಿಯ ಪೇಸ್ಟ್ ನ್ನು ಅಂಗೈ ಹಿಂಭಾಗ ಹಚ್ಚಿ ನೋಡುವುದು.ಅಲರ್ಜಿ ಸಮಸ್ಯೆ ಕಾಣಿಸಿಕೊಂಡರೆ ಬಳಸಬಾರದು.ಅರಿಶಿನವು ಮೆಲನಿನ್ ಉತ್ಪತ್ತಿ ಮಾಡುವ ಪ್ರೋಟೀನ್ ಹಾಗೂ ಕಿಣ್ವವನ್ನು ನಿಯಂತ್ರಿಸುವುದು ಹಾಗೂ ಚರ್ಮದ ಕಲೆಗಳನ್ನು ಕಡಿಮೆ ಮಾಡುವುದು.ಸೂರ್ಯನ ಅತಿನೇರಳೆ ಕಿರಣಗಳಿಂದ ಉಂಟಾಗುವ ಹಾನಿಯನ್ನು ತಡೆಗಟ್ಟಲು ಸಹಕಾರಿಯಾಗಿದೆ.

ಕುರುಗಳು ಒಡೆಯಲು,

ಹರಳೆಣ್ಣೆ ಯಲ್ಲಿ ಅರಿಶಿನ ಪುಡಿಯನ್ನು ಕಲಸಿ ಬಿಸಿ ಮಾಡಿ ಕುರುಗಳ ಮೇಲೆ ಲೇಪಿಸಿ ಗೌಸ್ ಇಲ್ಲವೇ ಬಟ್ಟೆಯನ್ನು ಕಟ್ಟುವುದು.ಈ ರೀತಿಯಾಗಿ ದಿನಕ್ಕೆ ಎರಡು ಬಾರಿ ಮಾಡುತ್ತಾ ಬಂದರೆ ಕುರುಗಳು ಒಡೆಯುತ್ತದೆ. ಇದರೊಟ್ಟಿಗೆ ಅರಿಶಿನದ ಹಾಲನ್ನು ದಿನದಲ್ಲಿ ಎರಡು ಬಾರಿ ಸೇವಿಸಬೇಕು.ಪ್ರೋಇನ್ಫ್ಲೋಮೇಟರಿ ಸೈಟೋಕೈನ್ಸ ಕಡಿಮೆ ಮಾಡಿ ಊತವನ್ನು ಕಡಿಮೆ ಮಾಡುತ್ತದೆ.

ಕೆಮ್ಮು ಶೀತ,ಗಂಟಲು ನೋವು ಸಮಸ್ಯೆಗಳಿಗೆ,

ಗೋಲ್ಡನ್ ಮಿಲ್ಕ್ ಅಂದರೆ ಹಾಲಿಗೆ ೧-೨ ಗ್ರಾಂ ಅರಿಶಿನ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ ಆಸಿಡಿಟಿ ಸಮಸ್ಯೆ ಇಲ್ಲವಾದಲ್ಲಿ ಸ್ವಲ್ಪ ಕಾಳು ಮೆಣಸಿನ ಪುಡಿ ಬೆರೆಸಿ ಬಿಸಿ ಇರುವಾಗಲೇ ಸೇವಿಸುವುದು. ಇದರಿಂದ ಸಾಮಾನ್ಯ tಶೀತ, ನೆಗಡಿ ನಿವಾರಣೆಯಾಗುತ್ತದೆ.ಸ್ವಲ್ಪ ಬಿಸಿ ನೀರಿನಲ್ಲಿ ಅರಿಶಿನ ಪುಡಿಯನ್ನು ಹಾಗೂ ಉಪ್ಪನ್ನು ಸೇರಿಸಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವು ಪರಿಹಾರವಾಗುತ್ತದೆ.

ಅರ್ಶದಲ್ಲಿ ಲೇಪನಾರ್ಥ,

ಎಕ್ಕದ ಹಾಲು ಹಾಗೂ ಅರಿಶಿನ ಸೇರಿಸಿ ಪೇಸ್ಟ್ ಮಾಡಿ ಅರ್ಶದ ಮೊಳೆಗಳಿಗೆ ಲೇಪನಾರ್ಥ ಉಪಯೋಗಿಸುವುದು.

ಹಲ್ಲು ನೋವಿಗೆ,

ಸಾಮಾನ್ಯ ಹಲ್ಲು ನೋವಿಗೆ ಅರಿಶಿನ,ಸೈಂಧವ ಉಪ್ಪು ಹಾಗೂ ಸಾಸಿವೆ ಎಣ್ಣೆ ಬೆರೆಸಿ ಹಲ್ಲನ್ನು ಉಜ್ಜುವುದು. ಹಲ್ಲು ನೋವು ಶಮನವಾಗುವುದಲ್ಲದೆ ಹಲ್ಲು ಬಿಳುಪಾಗುವುದು.

ಅಥೆರೋಸ್ಕ್ಲೇರೋಸಿಸ್ ಸಮಸ್ಯೆಯಲ್ಲಿ,

ತನ್ನ ಕಫ ಮೇದೋಹರ ಗುಣದಿಂದಾಗಿ ರಕ್ತ ನಾಳಗಳಲ್ಲಿ ಉಂಟಾದ ಅವರೋಧ ನಿವಾರಣೆಗೆ ಸಹಕಾರಿ ಯಾಗಿದೆ.
ಇನ್ನೂ ಅನೇಕ ಔಷದೀಯ ಗುಣಗಳನ್ನು ಹೊಂದಿರುವ ಈ ಗಿಡಮೂಲಿಕೆ ಭಾರತೀಯರ ಅಡುಗೆಯ ಅವಿಭಾಜ್ಯ ಅಂಗವಾಗಿರುವುದು ಶ್ಲಾಘನೀಯ ಸಂಗತಿ.

ಅರಿಶಿನ ಒಳಗೊಂಡಿರುವ ಪ್ರಮುಖ ಆಯುರ್ವೇದ ಔಷಧ ಗಳೆಂದರೆ, ಹರಿದ್ರಾ ಕಾಂಡ, ನಿಶಾಮಲಕಿ ಚೂರ್ಣ, ಖದೀರಾದಿ ವಟಿವಟಿ, ನಿಶಾಕಟಕಾದಿ ಕಷಾಯ etc.

11/06/2021

Dr usha vinod


ನೆಲ್ಲಿಕಾಯಿ

ಆಯುರ್ವೇದದ ಪ್ರಮುಖ ಔಷಧಗಳ ಆಕರಗಳಲ್ಲಿ ನೆಲ್ಲಿಕಾಯಿಯು ಒಂದು.ನೆಲ ನೆಲ್ಲಿ, ಕಿರು ನೆಲ್ಲಿ,ದೊಡ್ಡ ನೆಲ್ಲಿ ಮುಂತಾದ ಪ್ರಜಾತಿಗಳನ್ನು ಹೊಂದಿದ್ದು ಒಗರು ಹೆಚ್ಚಾಗಿರುವ ಬೆಟ್ಟದ ನೆಲ್ಲಿಕಾಯಿಯು ಶ್ರೇಷ್ಠ.
ಚಟ್ನಿ, ಸಲಾಡ್, ಉಪ್ಪಿನಕಾಯಿ,ಮೊರಬ್ಬ ಇನ್ನೂ ಹಲವಾರು ರೂಪಗಳಲ್ಲಿ ಉಪಯೋಗಿಸಲ್ಪಡುವ ನೆಲ್ಲಿಕಾಯಿಯು ಲವಣ ರಸ ಹೊರತು ಪಡಿಸಿ (ಸಿಹಿ,ಕಟು,ತಿಕ್ತ,ಕಷಾಯ,ಕಹಿ) ಪಂಚ ರಸಗಳನ್ನು ಹೊಂದಿದೆ.ಶೀತ ವೀರ್ಯ ವಾಗಿದೆ.
ನೆಲ್ಲಿಕಾಯಿಯನ್ನು ವಾತಪ್ರಧಾನ ವ್ಯಾಧಿ ಗಳಲ್ಲಿ ಎಳ್ಳೆಣ್ಣೆ ಯೊಂದಿಗೆ ಸೇವಿಸಬೇಕು.
ಪಿತ್ತ ಪ್ರಧಾನ ವ್ಯಾಧಿ ಗಳಲ್ಲಿ ತುಪ್ಪದ ಜೊತೆ ಸೇವಿಸಬೇಕು.ಕಫ ಪ್ರಧಾನ ವ್ಯಾಧಿ ಗಳಲ್ಲಿ ಜೇನು ತುಪ್ಪ ದೊಂದಿಗೆ ಸೇವಿಸಬೇಕು.ನೆಲ್ಲಿಕಾಯಿಯನ್ನು ಹಾಲಿನ ಜೊತೆ ಸೇವಿಸಬಾರದು.

ವಯಸ್ಥಾಪಕವಾಗಿ,

ಚ್ಯವನಪ್ರಾಶ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಚ್ಯವನಪ್ರಾಶ ಲೇಹ್ಯ ಈ ಹೆಸರು ಪಡೆಯಲು ರೋಚಕ ಕಥೆಯಿದೆ.ಅಂಧರಾದ ಚ್ಯವನ ಮಹರ್ಷಿಗಳು ಅಶ್ವಿನಿ ದೇವತೆಗಳಿಂದ ವಿಶಿಷ್ಟ ವಾದ ಲೇಹ್ಯವನ್ನು ಪಡೆದು ಸೇವಿಸಿದಾಗ ಅವರ ಮುಪ್ಪು ಕಳೆದು ಚಿರಯೌವನ ಪಡೆದರು.ಈ ಲೇಹ್ಯವೇ ಮುಂದೆ ಚ್ಯವನಪ್ರಾಶ ಎಂಬ ನಾಮಧೇಯ ಪಡೆದುಕೊಂಡಿತು.ಪಿತ್ತ ಪ್ರಕ್ರತಿಯವರು ರಜತಯುಕ್ತ ಚ್ಯವನಪ್ರಾಶ ಸೇವಿಸುವುದು ಒಳ್ಳೆಯದು.

ಕಣ್ಣಿನ ಆರೋಗ್ಯಕ್ಕೆ,

ತ್ರಿಫಲಾ ಚೂರ್ಣದಿಂದ ತಯಾರಿಸಿದ ವಸ್ತ್ರ ಘಾಳಿತ‌ ಕಷಾಯದಿಂದ ಕಣ್ಣು ತೊಳೆಯುವುದರಿಂದ ವಿಶೇಷ ಲಾಭ ಸಿಗುವುದು.

ಕೂದಲಿನ ಸಮಸ್ಯೆ ನಿವಾರಣೆಗೆ,

ಕೂದಲಿನ ಆರೋಗ್ಯಕ್ಕೆ ನೆಲ್ಲಿಕಾಯಿಯು ತುಂಬ ಒಳ್ಳೆಯದು.ಕೂದಲು ಉದುರುವಿಕೆ,ಅಕಾಲಿಕ ಬೊಕ್ಕು ತಲೆ, ಬಾಲ ನೆರೆ ಮುಂತಾದ ಕೂದಲಿನ ಸಮಸ್ಯೆಗಳಿಗೆ ರಾಮಬಾಣವಾಗಿದೆ.ನೈಸರ್ಗಿಕ ಹೇರ್ ಕಂಡೀಷನರ್ ಆಗಿ ಕೆಲಸ ಮಾಡುತ್ತದೆ.ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ ಕೊಲಜನ್ ಪ್ರೋಟೀನ್ ಉತ್ಪಾದನೆಗೆ ಸಹಕಾರಿ.ಈ ಪ್ರೋಟೀನ್ ಹೊಸ ಕೂದಲಿನ ಉತ್ಪತ್ತಿಗೆ ಸಹಕಾರಿಯಾಗಿದೆ.ಪಿತ್ತಹರವಾಗಿರುವುದರಿಂದ ಖಾಲಿತ್ಯ (ಕೂದಲು ಉದುರುವಿಕೆ), ಪಾಲಿತ್ಯ(ಕೂದಲು ಬೆಳ್ಳಗಾಗುವುದು) ಸಮಸ್ಯೆ ನಿವಾರಣೆಯಾಗುತ್ತದೆ.
ಹರಳೆಣ್ಣೆ+ಬಾದಾಮ್ ಎಣ್ಣೆ+ನೆಲ್ಲಿಕಾಯಿ ಪುಡಿ+ಮೊಸರು ಸೇರಿಸಿ ಪೇಸ್ಟ್ ಮಾಡಿ ತಲೆಗೆ ಹಚ್ಚಿ ೩೦ನಿಮಿಷಗಳ ನಂತರ ತೊಳೆಯಬೇಕು.

ಅಂಗಾಲು ಅಂಗೈ ಉರಿಯುವ ಸಮಸ್ಯೆಗಳಿಗೆ,

ಮಜ್ಜಿಗೆಯಲ್ಲಿ ನೆಲ್ಲಿಕಾಯಿ ಚೂರ್ಣ ಬೆರೆಸಿ ಕೊಡುವುದು.ಉಷ್ಣತೆಯಿಂದ ಕಣ್ಣು ಉರಿಯುತ್ತಿದ್ದರೆ ತಲಧಾರಣ(ನೆಲ್ಲಿಕಾಯಿಯ ಪೇಸ್ಟ್ ನೆತ್ತಿಯ ಮೇಲೆ ಲೇಪಿಸುವುದು) ಪ್ರಯೋಜನಕಾರಿ.

ಪ್ರಮೇಹಹರವಾಗಿ,

ನೆಲ್ಲಿಕಾಯಿ ಹಾಗೂ ಅರಿಷಿಣ ಸೇವಿಸುವುದು ಪ್ರಮೇಹವನ್ನು ಹತೋಟಿಯಲ್ಲಿಡಲು ಸಹಕಾರಿ.ನೆಲ್ಲಿಕಾಯಿ ಮೆದೋಜೀರಕ ಗ್ರಂಥಿ ಇನ್ಸುಲಿನ್ ಉತ್ಪತ್ತಿ ಮಾಡುವಂತೆ ಉತ್ತೇಜಿಸುತ್ತದೆ. ಇದರಲ್ಲಿರುವ ಎಲಿಗಿಕ್ ಆಸಿಡ್, ಗ್ಯಾಲಿಕ್ ಆಸಿಡ್ ಡಯಾಬಿಟಿಸ್ ನಿಯಂತ್ರಣ ದಲ್ಲಿಡಲು ಸಹಕಾರಿ.

ನೆಲ್ಲಿಕಾಯಿಯು ಇನ್ನೂ ಅನೇಕ ರೀತಿಯ ಖಾಯಿಲೆಗಳ ಚಿಕಿತ್ಸೆಯಲ್ಲಿ ಉಪಯೋಗಿಸಲ್ಪಡುತ್ತದೆ.

ನೆಲ್ಲಿಕಾಯಿ ಒಳಗೊಂಡಿರುವ ಪ್ರಮುಖ ಆಯುರ್ವೇದ ಔಷಧಗಳೆಂದರೆ, ತ್ರಿಫಲಾ ಚೂರ್ಣ,ಚ್ಯವನಪ್ರಾಶ,ಧಾತ್ರಿಲೋಹ,ಫಲಾಸವ,ಆಮಲಕ್ಯಾದಿ ಚೂರ್ಣ ಇತ್ಯಾದಿ.

Want your business to be the top-listed Beauty Salon in Mysore?
Click here to claim your Sponsored Listing.

Category

Telephone

Address

Raj Rajrajeshwari Nagar. Mysore
Mysore

Opening Hours

Monday 10:30am - 1:30pm
6:30pm - 8pm
Tuesday 10:30am - 1:30pm
6:30pm - 8pm
Wednesday 10:30am - 1:30pm
6:30pm - 8pm
Thursday 10:30am - 1:30pm
6:30pm - 8pm
Friday 10:30am - 1:30pm
6:30pm - 8pm