Bharat News Beats
Your Pulse on the Nation
Stay connected with real-time news, viral videos, and trending headlines from India and beyond.
At Bharat News Beats, we deliver
https://www.youtube.com/@bharatnewsbeats7490
BHARAT NEWS BEATS
#bharatnewsbeats
ಮದುವೆ ನೆನಪಿಗಾಗಿ ಫೋಟೋನೋ, ಫೋಟೋಗಾಗಿ ಮದುವೆನೋ🤪 ಗಿಚ್ಚಿ-ಗಿಲಿಗಿಲಿ ಜ್ಯೂನಿಯರ್ಸ್ | ಶನಿ-ಭಾನು ರಾತ್ರಿ 9 #ಗಿಚ್ಚಿಗಿಲಿಗಿಲಿ #ಕಲರ್‌ಫುಲ್‌ಕತೆ
ಮಳೆ ಹುಡುಗಿಯ ಕನ್ನಡ ಪ್ರೀತಿ: ಯಶ್ ಸಾಧನೆಗೆ ಪೂಜಾ ಗಾಂಧಿಯ ಅಕ್ಷರ ನಮನ ವೈರಲ್
ರಶ್ಮಿಕಾ–ವಿಜಯ್ ಆರತಕ್ಷತೆಗೆ ಕನ್ನಡದ ಸೆಲೆಬ್ರಿಟಿಗಳ ಸಂಭ್ರಮದ ಹಾಜರಿ
ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಅವರ ವಿವಾಹ ಆರತಕ್ಷತೆ ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಚಿತ್ರರಂಗ ಹಾಗೂ ರಾಜಕೀಯ ವಲಯದ ಅನೇಕ ಗಣ್ಯರು ಆಗಮಿಸಿ ನವದಂಪತಿಗೆ ಶುಭಾಶಯ ಕೋರಿದರು. ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆಹ್ವಾನ ಸ್ವೀಕರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕನ್ನಡ ನಟಿಯರಾದ ಆಶಿಕಾ ರಂಗನಾಥ್ ಹಾಗೂ ಶ್ರೀಲೀಲಾ ಕೂಡ ಆರತಕ್ಷತೆಯಲ್ಲಿ ಹಾಜರಾಗಿ ದಂಪತಿಗೆ ಶುಭ ಹಾರೈಸಿದರು. ರಶ್ಮಿಕಾ ಮತ್ತು ಆಶಿಕಾ ನಡುವೆ ಇರುವ ಸ್ನೇಹದ ಕಾರಣ ಆಶಿಕಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೆ, ‘ಪುಷ್ಪ 2’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದ ಹಿನ್ನೆಲೆ ಶ್ರೀಲೀಲಾ ಕೂಡ ತಾಯಿಯೊಂದಿಗೆ ಹಾಜರಾಗಿದ್ದರು. ಇದೇ ವೇಳೆ ಬಾಲಿವುಡ್‌ನಿಂದ ಕರಣ್ ಜೋಹರ್, ಕೃತಿ ಸನೋನ್, ಮೃಣಾಲ್ ಠಾಕೂರ್ ಸೇರಿದಂತೆ ಹಲವರು ಭಾಗವಹಿಸಿ ನವಜೋಡಿಗೆ ಶುಭಾಶಯ ಕೋರಿದರು.
ಸರ್ಕಾರಿ PU ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಉಚಿತ ಪಠ್ಯಪುಸ್ತಕ ಯೋಜನೆ ಜಾರಿ
ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಉಚಿತ ಪಠ್ಯಪುಸ್ತಕ ವಿತರಣೆ ಯೋಜನೆಯನ್ನು ಜಾರಿಗೆ ತಂದಿದೆ. ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟದಿಂದ ಪಠ್ಯಪುಸ್ತಕಗಳನ್ನು ಖರೀದಿಸಲು ತೊಂದರೆ ಅನುಭವಿಸಬಾರದು ಎಂಬ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ. ಸರ್ಕಾರ ಈಗಾಗಲೇ ಸರ್ಕಾರಿ ಕಾಲೇಜುಗಳಲ್ಲಿ ಡಿಜಿಟಲ್ ಬೋರ್ಡ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಈಗ ಉಚಿತ ಪಠ್ಯಪುಸ್ತಕ ನೀಡುವ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮುಂದಾಗಿದೆ. ಈ ಯೋಜನೆಯಿಂದ ವಿದ್ಯಾರ್ಥಿಗಳು ತರಗತಿ ಆರಂಭವಾದ ಮೊದಲ ದಿನದಿಂದಲೇ ಓದಿಗೆ ಸಜ್ಜಾಗಲು ಸಾಧ್ಯವಾಗುತ್ತದೆ. ಜೊತೆಗೆ ಸರ್ಕಾರಿ ಪಿಯು ಕಾಲೇಜುಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುವ ನಿರೀಕ್ಷೆಯೂ ಇದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ರಾಜ್ಯ ಬಜೆಟ್‌ನಲ್ಲಿ ಮದ್ಯದ ದರ ಏರಿಕೆ ಸಾಧ್ಯತೆ: ಬಾಟಲಿ ಖರೀದಿಗೆ ಹೆಚ್ಚುವರಿ ಟ್ಯಾಕ್ಸ್ ಭೀತಿ
ಮಾರ್ಚ್ 6ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್‌ನಲ್ಲಿ ಮದ್ಯದ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರ ಅಬಕಾರಿ ಸುಂಕ ಹೆಚ್ಚಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದು, ಮದ್ಯದ ದರದಲ್ಲಿ ಸುಮಾರು 10 ರಿಂದ 12 ಶೇಕಡಾ ವರೆಗೆ ಹೆಚ್ಚಳವಾಗಬಹುದು ಎನ್ನಲಾಗುತ್ತಿದೆ. ಅಬಕಾರಿ ಇಲಾಖೆಗೆ ಈ ಹಣಕಾಸು ವರ್ಷದಲ್ಲಿ ₹40,000 ಕೋಟಿ ರಾಜಸ್ವ ಸಂಗ್ರಹದ ಗುರಿ ನೀಡಲಾಗಿದ್ದು, ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹವಾಗದ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಏರಿಕೆಯಿಂದ ಸಾಮಾನ್ಯ ಮದ್ಯದ ಬಾಟಲಿಗಳ ಬೆಲೆಯಲ್ಲಿ ₹10 ರಿಂದ ₹20 ಹಾಗೂ ಪ್ರೀಮಿಯಂ ಮದ್ಯದಲ್ಲಿ ₹50 ರಿಂದ ₹100 ವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ಇದರಿಂದ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕವೂ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ ಸುಮಾರು ₹52,000 ರಿಂದ ₹60,000 ಕೋಟಿ ಅಗತ್ಯವಿರುವುದರಿಂದ ಸರ್ಕಾರ ಮದ್ಯದ ಮೇಲಿನ ತೆರಿಗೆ ಹೆಚ್ಚಳದತ್ತ ಗಮನ ಹರಿಸಿದೆ.
05/03/2026
📝 Zero Paperwork
🤠 Available for both salaried and self employed
⏱ Instant Loan Approval
👉🏻 Same Day Disbursal
Click here to apply now:
Apply Now: loan.gromo.in/pf/vYQtlbunxm
05/03/2026
*KIWI Yes Bank Rupay Credit Card*
💳 Lifetime Free Credit Card – No joining or annual fees
📲 Use Anywhere – Pay via any UPI app with your virtual card
⚡ Instant Activation – Simple onboarding and verification
💰 No Minimum Spend required to use your card
🔁 2x Assured Cashback on every “Scan & Pay” transaction
🏦 Instant Cashback Credit – Redeem anytime, directly to your bank account
*APPLY NOW*
Apply Now: sales.gromo.in/kw/vYQtlbunxm
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಪ್ರಕರಣ ಬೆಳಕಿಗೆ ಬಂದಿದೆ. ಸರ್ವೆ ನಂ. 28/2ರಲ್ಲಿ ಸುಮಾರು 200 ಟಿಪ್ಪರ್ ಮಣ್ಣು 10 ಮೀಟರ್ ಆಳಕ್ಕೆ ತೆಗೆಯಲಾಗಿದ್ದು, 20 ರಿಂದ 29 ಫಲಧಾರಕ ಮಾವಿನ ಗಿಡಗಳನ್ನು ಕತ್ತರಿಸಿ ನಾಶಪಡಿಸಿರುವ ಆರೋಪ ಕೇಳಿಬಂದಿದೆ. ಸುಮಾರು 16 ರಿಂದ 20 ವರ್ಷಗಳ ಪರಿಶ್ರಮದಿಂದ ಬೆಳೆಸಿದ ತೋಟವನ್ನು ಉದ್ದೇಶಪೂರ್ವಕವಾಗಿ ಹಾನಿಗೊಳಿಸಲಾಗಿದೆ ಎಂದು ಭೂಸ್ವಾಮಿ ಗೋಪಿ ಜೆ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಆರೋಪಿಗಳು ಯಾವುದೇ ಸರಕಾರಿ ಅನುಮತಿ ಇಲ್ಲದೆ ಗಣಿಗಾರಿಕೆ ನಡೆಸಿರುವುದಾಗಿ ಹೇಳಲಾಗಿದ್ದು, Mines and Minerals (Development and Regulation) Act, 1957 ಹಾಗೂ Karnataka Minor Mineral Concession Rules, 1994 ಉಲ್ಲಂಘನೆಯಾಗಿದೆ ಎನ್ನಲಾಗಿದೆ. ವಿರೋಧ ವ್ಯಕ್ತಪಡಿಸಿದ ವೇಳೆ ಪ್ರಾಣ ಬೆದರಿಕೆ ಹಾಕಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಪ್ರಕರಣ ಕುರಿತು ಪೊಲೀಸರಿಗೆ ಹಾಗೂ ತಹಸೀಲ್ದಾರ್ ಕಚೇರಿಗೆ ದೂರು ಸಲ್ಲಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ
ರುಕ್ಮಿಣಿ ವಸಂತ್ #ರುಕ್ಮಿಣಿವಸಂತ್
Click here to claim your Sponsored Listing.
Category
Website
Address
GRINAGARA
Bangalore
